ಸೋಮವಾರ, ಜನವರಿ 27, 2014

ಬಿನ್ನಹ :












ಕ್ರಿಸ್ತನ ನೆಪದಲ್ಲಿ
ಭಾನುವಾರಕ್ಕೊಮ್ಮೆ
ಚರ್ಚಿನ ಅಂಗಳದಲ್ಲಿ
ಕುಲುಕುಲು ನಗೆ ಅರಳುತ್ತಿದ್ದರೆ
ಚರ್ಚುಗಳು ಏಳಲಿ ಬಿಡಿ.

ಅಲ್ಲಾನ ನೆಪದಲ್ಲಿ
ಶುಕ್ರವಾರಕ್ಕೊಮ್ಮೆ
ಮಸೀದಿಯಂಗಳದಲ್ಲಿ
ಧ್ಯಾನ  ಎದೆ ತುಂಬುತ್ತಿದ್ದರೆ
ನಮಾಜು ಮಾಡಲಿ ಬಿಡಿ.

ದೇವರ ಮೂರ್ತಿಗೆ
ಮುಗಿದ ಕೈಗೆ
ಬಾರಿಸಿದ ಗಳ್ಳಾಂಗಂಟಿ
ಗುಡಿಯಲ್ಲಿ ಹಚ್ಚಿಟ್ಟ ಊದಿನಕಡ್ಡಿ
ಮನಸ್ಸೆಲ್ಲಾ ಸ್ವಚ್ಚವಾಗುತ್ತಿದ್ದರೆ
ಗುಡಿಗಳನ್ನು ಕಟ್ಟಲು ಬಿಡಿ.

ಚರ್ಚು ಮಸೀದಿ ಮಂದಿರ
ಏಳಲು ಬಿಟ್ಟು
ಅವು ಬೆಂಕಿ ಹಚ್ಚುವ
ತಾಣವಾದರೆ ಮಾತ್ರ
ಅವೆಲ್ಲವುಗಳನ್ನು ಬೀಳಿಸಿಬಿಡಿ.

-ಬಸವರಾಜ ಹೂಗಾರ







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ