ನೆನಪುಗಳ
ಗಾಯ ಮಾಯದು ಬೇಗ
ಜೀವಹಿಂಡದೆ.
ಕನಸುಗಳ
ದಾಹ ನೀಗದು ಈಗ
ನನಸಾಗದೇ.
ಪ್ರಿಯತಮೆಯ
ಮೋಹ ಬಯಸಿದಾಗ
ಸಿಗದಾಗಿದೆ.
ಅಪನಂಬಿಕೆ
ದ್ರೋಹ ಸಹಿಸಿದಾಗ
ನೋವು ಸಾವಿದೆ.
ಮರೆಯಬೇಕು
ಕಹಿ ನೆನಪುಗಳ
ದಾರಿಕಾಣದೇ...
ಬದುಕಬೇಕು
ಕೊಂದು ಕನಸುಗಳ
ಎಂದೆನಿಸಿದೆ.
ಪ್ರೀತಿ ಮಧುರ
ತ್ಯಾಗ ಅಮರ ಸುಳ್ಳು
ಅರಿವಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ