ಶ್ಶ! ಯೇ ಕುಹೂ ಕುಹೂ
ಕೂಗಬೇಡಲೇ ಕೋಗಿಲೆ
ಚುನಾವಣಾ ಸಂಹಿತೆ ಜಾರಿಯಲ್ಲಿದೆ.
ಸಿಕ್ಕಲೆಲ್ಲಾ ಸಿಕ್ಕಂತೆ
ಬೊಗಳಬೇಡವೇ ಶ್ವಾನ
ಚುನಾವಣಾ ಸಂಹಿತೆ ಜಾರಿಯಲ್ಲಿದೆ.
ಕೂಗೋರೆಲ್ಲಾ ಕೂಗಿಕೊಳ್ಳಲಿ
ಬೊಗಳೋರೆಲ್ಲಾ ಬೊಗಳಿಕೊಳ್ಳಲಿ
ಬಾಯಿಮುಚ್ಚಿ ಕಾಗೆಗಳೆ ಚುನಾವಣಾ ಸಂಹಿತೆ
ಜಾರಿಯಲ್ಲಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ