ಶ್ವಾನವೊಂದು ವೃತ್ತದ
ಬಳಿ ಬಂದು
ನಾಯಿ ಬಳಗವೆಲ್ಲ ಕರೆತಂದು
ಜೋರಾಗಿ ಬೊಗಳುತಿದೆ.
ಹಿಂದೆ ಗೋಡೆ
ಕಂಬಕ್ಕಟ್ಟಿದ
ಬಣ್ಣ ಬಣ್ಣದ
ಬ್ಯಾನರು ಪೋಸ್ಟರು
ಪಕ್ಷವೊಂದರ ಬಾವುಟ
ಹಾರುತಿದೆ.
ನೋಡಿದವರು ಓಡಿಬಂದು
ನಾಯಿಬಳಗಕೆ ಗದರಿ
ಹೇಳಿದರು
'ಏ ಬೊಗಳಬೇಡಿ ಚುನಾವಣೆ ಸಂಹಿತೆ ಜಾರಿಯಲ್ಲಿದೆ',
ಶ್ವಾನಗಳೆಲ್ಲ ಕೋಪಗೊಂಡು
ಹೇಳಿದವರ ಅಟ್ಟಸಿಕೊಂಡು
ಬೋಗಳೋ ಕಾಯಕ
ಮುಂದುವರೆಸಿದವು.
ಆಯೋಗದಲಿ ದೂರಾಯಿತು
ನೊಟೀಸು ಜಾರಿಯಾಯ್ತು
ಬೊಗಳೋ ನಾಯಿ
ಬಾಯಿ ಹಿಡಿಯೋರಾರು?
ಕೋಮುನಾಯಿ, ಕಾಮಿನಾಯಿ
ಒಂದಾಗಿ ಚೆಂದಾಗಿ ಅರುಚುತಿರುವವು.
ಬೆದರಿಕೆಗೆ ಜಗ್ಗಲಿಲ್ಲ
ನೋಟಿಸಿಗೆ ಬಗ್ಗಲಿಲ್ಲ
ಹಾಗೂ ಹೀಗೂ
ಚುನಾವಣೆ ಮುಗಿದೆ
ಹೋಯಿತು.
ಕೇಸುಗಳೆಲ್ಲಾ ನಿಖಾಲಿಯಾದವು
ನಿರೀಕ್ಷಗಳೆಲ್ಲಾ ಹುಸಿಹೋದವು
ನಾಯಿಪಕ್ಷ ಅಧಿಕಾರಕೆ ಬಂದಾಯಿತು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ